
2nd April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಜಿಲ್ಲೆ ಕೊಪ್ಪಳ ತಾಲೂಕಿನ ಇಲಕಲ್ಗಡ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀ ಮಾರುತೇಶ್ವರನ ಮಹಾರಥೋತ್ಸವ ವಿಜೃಂಭಣೆಯಿಂದ ಜರಗಿತು.
ಗ್ರಾಮದ ಶ್ರೀ ಮಾರುತೇಶ್ವರ ಮಹಾ ರಥೋತ್ಸವಕ್ಕೆ ಕೊಪ್ಪಳ ಸಂಸ್ಥಾನ ಗವಿಶ್ರೀ ಮಠದ ಪೂಜ್ಯರಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕುದರಿಮೋತಿ ಸಂಸ್ಥಾನ ಮಠದ ವಿಜಯ ಮಹಾಂತೇಶ್ವರ ಮಹಾಸ್ವಾಮಿಗಳು ಹಾಗೂ ಕುಕನೂರು ಪಟ್ಟಣದ ಮುಂಡರಗಿ ಶ್ರೀಅನ್ನದಾನೇಶ್ವರ ಶಾಖಾಮಠದ ಮಹದೇವ ಮಹಾಸ್ವಾಮಿಗಳು ಚಾಲನೆ ನೀಡಿದರು.
ಶ್ರೀ ಮಾರುತೇಶ್ವರ ಜಾತ್ರೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಹನುಮಂತ ದೇವರಿಗೆ ಅಭಿಷೇಕ ನಮಸ್ಕಾರ ಹಾಕುವುದು ಮತ್ತು ಪೂಜಾ ಕಾರ್ಯ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಎತ್ತುಗಳ ಬಹುಮಾನ ವಿತರಣೆ ಮತ್ತು ಮಠಾಧೀಶರಿಂದ ಹಿತನುಡಿಗಳ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು
ರಥೋತ್ಸವಕ್ಕೂ ಮುನ್ನ ದಿನ ಭಾನುವಾರ ಸಂಜೆ ಲಘು ರಥೋತ್ಸವ ನಡೆಯಿತು ಬೆಳಿಗ್ಗೆ ಜೋಡಿಯತ್ತುಗಳ ಭಾರ ಎಳೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಸುಮಾರು ಒಂದು 20 ರಿಂದ 30 ಜೋಡಿಗಳ ಊರುಗಳ ಎತ್ತುಗಳು ಭಾಗವಹಿಸಿದ್ದು ಪ್ರಥಮ ಬಹುಮಾನ 15 ತೊಲೆ ಬೆಳ್ಳಿ ದ್ವಿತೀಯ ಬಹುಮಾನ ಹತ್ತು ತೊಲೆ ಬೆಳ್ಳಿ ಘೋಷಿಸಿದರು ಪ್ರಥಮ ಬಹುಮಾನವನ್ನು ಲಾಯದುಣಸಿ ಗ್ರಾಮದ ಜೋಡೆತ್ತುಗಳು ಪಡೆದುಕೊಂಡವು, ದ್ವಿತೀಯ ಬಹುಮಾನವನ್ನು ಲಿಂಗದಳ್ಳಿ ಎತ್ತುಗಳು ಪಡೆದುಕೊಂಡವು.
ರಥೋತ್ಸವ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅರ್ಹತೆ ಹಾಗೂ ಇಷ್ಟಾರ್ಥಗಳನ್ನು ಈಡೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು .
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಹನುಮೇಶಪ್ಪ ಕುಷ್ಟಗಿ ವೀರಬಸಪ್ಪ ಶೆಟ್ಟರ್ ಗಂಗಾಧರಸ್ವಾಮಿ ಹನುಮಂತ್ ಕಾಟಾಪುರ್ ಮಾರುತಿ ತೋಟಗಂಟಿ ಬಸವರಾಜ್ ಬೋವಿ ರವಿ ದೇಸಾಯಿ ರವಿ ಪಟ್ಟಣಶೆಟ್ಟಿ ಮಲ್ಲಿಕಾರ್ಜುನ್ ಮಾಚನೂರು ಶರಣಪ್ಪ ಕುಂಬಾರ್ ಶಿವುಕುಮಾರ್ ಪ್ರದೀಪ್ ಮನ್ನಾಪುರ್ ನಾಗರಾಜ್ ಬಡಿಗೇರ್ ಮಾರುತೇಶ್ವರ ಕಮಿಟಿ ಅವರು ರೈತ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ